| ನನ್ನ ನಿನ್ನ ಹೃದಯವಿಂದು |
| ಪುಟಿದು ಪುಟಿದು ನಲಿಯುತಿದೆ |
| ಕೇಳು ಬಾ ಗೆಳತಿ |
| ನೀ ನನ್ನ ಮಡದಿ ಅನಿಸುತಿದೆ |
| ಬೆಸೆಯುತಿಹುದು ಮನಸು ಮನಸು |
| ಸಾಗುತಿರಲಿ ನಿರಂತರ |
| ಅಪ್ಪಿಕೊಳ್ಳಲೇನೆ ಬಿಗಿದು |
| ಕಾಡುತಿಹುದು ಅಂತರ |
| ಚೆಲುವೆ ನಿನ್ನ ಬಾಳಿನೆಡೆಗೆ |
| ತರುವೆ ನಗುವ ಅಲೆಯನು |
| ಅಷ್ಟ ದಿಕ್ಕುಗಳಿಗೆ ಕೂಗಿ |
| ಮನಸು ಬಿಚ್ಚಿ ಹೇಳ್ವೆನು |
| ಸರಸವಿರಸವಿರಲಿ ಮಧ್ಯ |
| ಮಧುರವಾಗಿ ನೂತನ |
| ಪ್ರೇಮದೊಡಲಿನಲ್ಲಿ ಇರಲಿ |
| ಪ್ರಣಯ ನಿತ್ಯ ವಿನೂತನ |
| -ನ.ಸು.ಕು |
No comments:
Post a Comment