Thursday, July 21, 2011

ನಗುವುದೊಂದೇ ಜೀವನ (ಸಂಗ್ರಹ)

೧. ಕುಮಾರಸ್ವಾಮಿ :- ೨೦-೨೦ ಆಡೋಣ ಬರ್ತಿಯಾ...?

ಯಡಿಯೂರಪ್ಪ :- ಒಂದು ಕಂಡೀಷನ್ .... ನನ್ನದೇ ಮೊದಲು ಬ್ಯಾಟಿನ್ಗ್ ಆಗಬೇಕು...
ಕುಮಾರಸ್ವಾಮಿ :- ಓ.ಕೆ... ಆದರೆ ನನ್ನದೂ ಒಂದು ಕಂಡೀಷನ್...

ಯಡಿಯೂರಪ್ಪ :- ಏನದು...?

ಕುಮಾರಸ್ವಾಮಿ :- ನನ್ನಪ್ಪನೇ ಹಂಪೈರ್ ಆಗಬೇಕು.... !!!!


."ಜೆಂಡೂ ಬಾಂಬ್ ಜೆಂಡೂ ಬಾಂಬ್" ಜಾಹಿರಾತಿನ ಶೈಲಿಯಲ್ಲಿ ಹಾಡಿರಿ, ಆನಂದಿಸಿ...

ಜೆಂಡೂ ಬಾಂಬ್.. jenduu ಬಾಂಬ್.. ಅಜ್ಜಿ ಬಿಟ್ಲು ಬಾಂಬ್.. ಅಜ್ಜಿ ಬಿಟ್ಟ ಫೋರ್ಸ್ ನಲ್ಲಿ ಅಜ್ಜ ಅಲ್ಲೇ ಗಾನ್.. ಅಜ್ಜಿ ಬಾಂಬ್.. ಅಜ್ಜ ಗಾನ್.. !!!!೩. ಸರ್ದಾರ್ : - ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ. ಪುಸ್ತಕ ವಿತರಕ (ಲೈಬ್ರೇರಿಯನ್) :- "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!೪. ಒಂದು ದಿನ ಸರ್ದಾರ್ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್^ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ. ಇದ್ದಕ್ಕಿದ್ದ ಹಾಗೆ ಏನೋ ಅದವನಂತೆ ಅದನ್ನು ಎಸೆದು... " ಚೀ.. ಸಗಣಿ... ಸಧ್ಯ ತುಳಿಯಲಿಲ್ಲ"... ೫. ಸರ್ದಾರ್ :- ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...? ಗುಂಡ : - ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ... ಸರ್ದಾರ್ :- ಅಯ್ಯೋ ಪೆದ್ಡು.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ...

ಪ್ರೀತಿ

*ಒನ್ ಸೈಡ್ ಪ್ರೀತಿ :- ಪ್ರೀತಿಯೆಂಬುದು ನೀರಿರದ ಬಾವಿಯಂತೆ, ಜನ ತಿಳಿದು ತಿಳಿದೂ ಅಲ್ಲಿಗೆ ಧುಮುಕುತ್ತಾರೆ, ಆಳವಿದ್ದರೆ ಸಾವು, ಇಲ್ಲದಿದ್ದರೆ ನೋವು - ಸುನಿಲ್ ಕುಮಾರ್. ಎನ್
 _____________________________________________________
* "ಪ್ರೀತಿಯೆಂಬುದು ದೇಹ ಸ್ಪರ್ಶಕ್ಕಲ್ಲ, ಅದು ಹೃದಯ ಸ್ಪರ್ಶಕ್ಕೆ".
- ಸುನಿಲ್ ಕುಮಾರ್.ಎನ್
______________________________________________________

Sunday, July 10, 2011

ಆಟೋ ಡ್ರೈವರ್ ಲವ್ ಸ್ಟೋರಿ

ಆತ್ಮೀಯ ಗೆಳೆಯರೇ, ಇಷ್ಟ ಪಟ್ಟಿದ್ದನ್ನು ಮತ್ತು ಹೇಳಲೇಬೇಕಾದುದ್ದನ್ನು ಬರೆದು ಬ್ಲಾಗಿನಲ್ಲಿ ಹಾಕುವುದು ನನ್ನದೊಂದು ಹವ್ಯಾಸ. ಅದೇ ರೀತಿ ನನ್ನ ಒಂದು ಈ ಭಾವನೆಗಳ ಹಂಚಿಕೆಯನ್ನು ನೀವೂ ಸಹ ಓದುತ್ತಿದ್ದೀರಿ ಎಂದು ನಂಬಿದ್ದೇನೆ.

ಮೊನ್ನೆ ಮೊನ್ನೆಯಷ್ಟೇ ಅಂದರೆ ದಿನಾಂಕ ೨೫.೦೬.೨೦೧೧ರಂದು ನಡೆದ ಘಟನೆಯಿದು. ಅಂದು ಶನಿವಾರ, ಗೆಳೆಯನೊಬ್ಬನನ್ನು ನೋಡಲೆಂದು ಕೋರಮಂಗಲದಲ್ಲಿರುವ ನನ್ನ ಹಳೆಯ ಆಫೀಸಿಗೆ ತೆರಳಿದ್ದೆ. ಅವನನ್ನು ಭೇಟಿ ನೀಡಿ ವಾಪಸ್ಸಾಗುವಾಗ ಬಸ್ಸಿಗಾಗಿ ಕಾದು ಕಾದು ಸಾಕಾಗಿ ಆಟೋದಲ್ಲಿಯೇ ಹೋಗಲು ನಿರ್ಧರಿಸಿದೆ. ಎದುರಿನಲ್ಲಿದ್ದ ಜ್ಯೋತಿನಿವಾಸ ಕಾಲೇಜು ಬೇರೆ. ಬಸ್ ಸ್ಟಾಂಡಿನ ಪೂರ್ತಿ ಬರೇ ಹುಡುಗಿಯರೇ ತುಂಬಿದ್ದರು. ಬಣ್ಣ ಬಣ್ಣದ ಚಿಟ್ಟೆಗಳಿಗೆ ಬಣ್ಣ ಬಣ್ಣದ ಉಡುಪನ್ನು ತೊಟ್ಟು ಅಲಂಕರಿಸಿ ಚಂದಕ್ಕೆ ಕಿಚ್ಚು ಹಚ್ಚುವರೆಂಬಂತೆ ಒಬ್ಬರಿಗಿಂತಲೊಬ್ಬರು ಅಲಂಕಾರದಲ್ಲಿ ಮೀರಿಸುವಷ್ಟು ಮೇಕಪ್, ಯಾವುದೋ ಮದುವೆ ಕಾರ್ಯಕ್ಕೋ ಅಥವಾ ಪಾರ್ಟಿಗೋ ಹೋಗುವಂತೆ ಕಾಣುತ್ತಿದ್ದರು.  ಆಗಿಂದಾಗೆ ಒಬ್ಬೊಬ್ಬರಾಗಿ ಬಂದು ತನ್ನ ಪ್ರೇಯಸಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಮಾಯವಾಗುತ್ತಿದ್ದ ಪ್ರಿಯತಮರು. ವೀಕೆಂಡ್ ಆದ್ದರಿಂದ ಬಸ್ಸುಗಳ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯಿತ್ತು. ಆಟೋದಲ್ಲಿಯೇ ಹೋಗಬೇಕೆಂದು ನಿರ್ಧರಿಸಿದ ನಾನು ಆಟೋಗಳ ಆಗಮನಕ್ಕಾಗಿಯೇ ಕಾಯುತ್ತಿದ್ದೆ. ಅದೇ ಸಮಯಕ್ಕೆ ತಕ್ಕಂತೆಯೇ ಬಂದ ಆಟೋ ಒಂದು ನನ್ನೆದುರಿಗೆ ನಿಂತಿತು. ಯಾರೋ ಇಬ್ಬರು ಹುಡುಗಿಯರನ್ನು ಕರೆತಂದಿದ್ದ. ಅವರೋ ನೋಡುವುದಕ್ಕೆ ಕಲ್ಲಿದ್ದಲಿಗಿಂತಲೂ ಕಪ್ಪಾಗಿದ್ದರೂ ಅವರ ಬಿಂಕ ಬಿನ್ನಾಣ ವೈಯಾರಗಳಿಗೆ ಕಡಿಮೆಯೇನೂ ಇರಲಿಲ್ಲ. ಅವರಿಬ್ಬರೂ ಇಳಿಯುತ್ತಿದ್ದಂತೆಯೇ ಆಟೋ ಚಾಲಕ ನನ್ನನ್ನು ನೋಡಿ "ಸಲಾಂ ಸಾಬ್" ಎಲ್ಲಿಗೆ ಹೋಗಬೇಕಿತ್ತು ಎಂದ.

ನನಗೋ ಸಮಯದ ಅಭಾವ ಇದ್ದರಿಂದ ಕೂಡಲೇ ಮನೆಗೆ ತೆರಳಿ ನಂತರ ಆಫೀಸಿಗೆ ಹೊರಡಬೇಕಾದ ಕಾರಣ ನಡಿಯಪ್ಪಾ ಬಿ.ಟಿ.ಮ್ ಲೇಔಟ್ಗೆ ಟೈಮ್ ಆಗಿದೆ ಎಂದೆ.
ಸರಿ ಬನ್ನಿ ಸಾರ್, ಬಟ್ ಮೀಟರ್ ಮೇಲೆ ೧೦ರುಪಾಯಿ ಹೆಚ್ಚು ಕೊಟ್ಟುಬಿಡಿ ಸಾರ್, ಯಾಕೋ ದುಡಿಮೆಯೇ ಸರಿಯಾಗಿ ಆಗುತ್ತಿಲ್ಲ ಎಂದ. ಬೇರೆ ಯಾವ ದಾರಿಯೂ ಕಾಣದೆ ಸರಿ ಎಂದು ಒಪ್ಪಿಕೊಂಡು ಆಟೋ ಹತ್ತಿದ ನನ್ನನ್ನು ಆಟೋ ಚಾಲಕ ದಾರಿಯುದ್ದಕ್ಕೂ ಮಾತನಾಡಿಸತೊಡಗಿದ. ಆತ ಹೆಚ್ಚೂ ಕಡಿಮೆ ನನ್ನ ವಯಸ್ಸಿನವನೇ ಆಗಿದ್ದ. ನೋಡುವುದಕ್ಕೆ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನಂತೆ ಕಾಣುತ್ತಿದ್ದ. ಸ್ವಲ್ಪ ದೂರ ಹೋದ ನಂತರ ತಿಳಿಯಿತು ಅವನು ಮುಸಲ್ಮಾನನೆಂದು. ನನಗೋ ಒಂದು ರೀತಿಯ ಅಚ್ಚರಿಯಾಯಿತು.ಕನ್ನಡ ಭಾಷೆಯನ್ನು ಅಷ್ಟು ಸ್ಪಷ್ಟವಾಗಿ ಸರಾಗವಾಗಿ ಯಾವ ತೊದಲೂ ಮಾಡದೆ ನುಡಿಯುತ್ತಿದ್ದ. ಕುತೂಹಲದಿಂದ ನಾನವನ್ನು ಕೇಳಿಯೇಬಿಟ್ಟೆ. ಸಾರ್ ನೀವು ಮುಸ್ಲಿಂ ವರ್ಗದವರಾಗಿ ಕನ್ನಡ ಭಾಷೆಯನ್ನು ಇಷ್ಟು ಸ್ಪಷ್ಟವಾಗಿ ಮಾತನಾಡುತ್ತಿದ್ದೀರಲ್ಲ  ಅದು ಹೇಗೆ ಸಾಧ್ಯ ಎಂದು ಕೇಳಿದೆ. ಅದಕ್ಕೆ ಅವನಿಂದ ಬಂದ ಉತ್ತರ ಹೇಗಿತ್ತೆಂದರೆ, ಕನ್ನಡ ನಾಡಿನಲ್ಲಿಯೇ ಹುಟ್ಟಿಬೆಳೆದು ಕನ್ನಡಕ್ಕೆ ಅಗೌರವ ತರುವಂತವರಿಗೆ ಕರೆದು ಕೆರದಲ್ಲಿ ಹೊಡೆಯುವಂತೆ ಇತ್ತು. ಆತ ಸ್ಪಷ್ಟವಾಗಿ ಹೇಳಿದ್ದು, ಸ್ವಾಮಿ ನಾನು ಮುಸ್ಲಿಂ ಜಾತಿಯವನೇ ಆಗಿರಬಹುದು ಆದರೆ ನಾನು ಹುಟ್ಟಿ ಬೆಳೆದಿದ್ದು ಕನ್ನಡ ಮಣ್ಣಿನಲ್ಲಿ, ಸಾಯುವುದೂ ಇದೆ ಕನ್ನಡ ಮಣ್ಣಿನಲ್ಲಿ. ನಾನು ಓದುವಾಗ ನನ್ನ ನೆಚ್ಚಿನ ಸಬ್ಜೆಕ್ಟ್ ಕನ್ನಡವೇ ಆಗಿತ್ತು. ಕನ್ನಡದಲ್ಲಿ ೧೨೫ಕ್ಕೆ ೧೧೦ ಅಂಕಗಳನ್ನು ಗಳಿಸಿದ್ದೇನೆ. ನನಗಿರುವ ಕನ್ನಡದ ಅಭಿಮಾನ ಎಷ್ಟೆಂದರೆ ನನ್ನ ಮಾತೃ ಭಾಷೆಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಇದೆ ಎಂದ.

ಹುಂ... ಅದಿರಲಿ ಬಿಡಿ ಸಾರ್, ಅಲ್ಲಿ ನೋಡಿ 
ಒಂದು ಹುಡುಗಿ ರಸ್ತೆಯ ಬದಿ ನಿಂತುಕೊಂಡು ಫೋನಿನಲ್ಲಿ ಹೇಗೆ ಮಾತನಾಡುತ್ತಾ ಜನಗಳಿಗೆ ಫೋಸ್ ಕೊಡುತ್ತಿದ್ದಾಳೆ ಅಂತ. ಇವರೆಲ್ಲ ಕಾಲೇಜಿಗೆ ಓದುವುದಕ್ಕೆ ಬರೋದಿಲ್ಲ ಸ್ಸಾರ್, ಅವಳಲ್ಲಿ ಇನ್ನು ೧೦ ನಿಮಿಷ ನಿಂತಿದ್ದರೆ ನೋಡಿಕೊಳ್ಳಿ, ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ. ಬಾಯ್ ಫ್ರೆಂಡ್ ಗಾಗಿ ಕಾಯುತ್ತಾ ನಿಂತಿದ್ದಾಳೆ. 

ಕಾಲೇಜು, ಸ್ಪೆಷಲ್ ಕ್ಲಾಸು ಅಂತ ಸುಳ್ಳು ಹೇಳಿ ಬಾಯ್ ಫ್ರೆಂಡ್ ಜೊತೆ ಪಾರ್ಕು, ಸಿನಿಮಾ ಅಂತ ಸುತ್ತಾಡುತ್ತಿರುತ್ತಾರೆ ಅಂದ. ಆದರೂ ಇವೆಲ್ಲ ಬೆಂಗಳೂರಿನಲ್ಲಿ ಕಾಮನ್ ಬಿಡಿ ಸ್ಸಾರ್.
ನಾನದಕ್ಕೆ ಏನೂ ಅಂತ ಉತ್ತರ ಕೊಡಲಿ? 
ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತ ಕುಳಿತಿದ್ದೆ. ಆದರೂ ಈ ಟಾಪಿಕ್ ಅನ್ನು ಮುಂದುವರಿಸಬೇಕೆಂದು ನಾನವನಿಗೆ "ಸಾರ್ ನೀವು ಯಾರನ್ನು ಪ್ರೀತಿಸುತ್ತಿಲ್ಲವಾ" ಎಂದು ಕೇಳಿದೆ. ಆತ ನೋಡಲೂ ಸಹ ಚೆನ್ನಾಗಿಯೇ ಇದ್ದ. 

ಅದಕ್ಕವನು ಒಂದು ದೊಡ್ಡ "ಲವ್ ಸ್ಟೋರಿಯನ್ನು" ಹೇಳಲು ಮುಂದಾದ. ಸ್ಸಾರ್ ನಾನು ಲವ್ ನಲ್ಲಿ ಬಿದ್ದು ಹಾಳಾಗಿಹೋದೆ. ಆದರೂ ಸಹ ನಾನು ಅವಳನ್ನು ಬಿಡಲಿಲ್ಲ. ನನಗೂ ನಿಮ್ಮಷ್ಟೇ ವಯಸ್ಸು ಸ್ಸಾರ್. ಬೆಂಗಳೂರಿನ ಜೆಪಿನಗರದ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ ಮುಂದಿನ ವಿಧ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಬಂದೆ. ನಮ್ಮ ಜನಾಂಗದಲ್ಲಿ ಸ್ವಲ್ಪ ಚಿಕ್ಕ ವಯಸ್ಸಿಗೆ ಕೆಲಸ ಹುಡುಕುವುದರಿಂದ ಓದುವುದನ್ನು ಬಿಟ್ಟು ಕಂಪನಿಯೊಂದರಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸಿದೆ. ಬೇರೆಯವರ ಹಂಗಿನಲ್ಲಿ ಅವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ ನಾನು ಅದನ್ನೂ ಬಿಟ್ಟು ಸ್ವಂತವಾಗಿ ಆಟೋ ತೆಗೆದುಕೊಂಡು ದುಡಿಯುತ್ತಿದ್ದೇನೆ. ಹೇಗೋ, ಆ "ಅಲ್ಲಾ" ನನಗೆ ದುಡಿಮೆಯ ದಾರಿಯನ್ನು ತೋರಿಸಿ ನನ್ನ ಹೊಟ್ಟೆಯನ್ನು ಕಾಪಾಡುತ್ತಿದ್ದಾನೆ. ಅದೊಂದು ದಿನ ಜಯನಗರದ "ಎನ್.ಎಂ.ಕೆ.ಆರ್.ವಿ" ಕಾಲೇಜಿನ ಬಳಿ ಪ್ರಯಾಣಿಕರನ್ನು ಬಿಟ್ಟು ಮುಂದಿನ ಟ್ರಿಪ್ಗಾಗಿ ಕಾಯುತ್ತಿರುವಾಗ ಒಂದು ಹುಡುಗಿಯನ್ನು ನೋಡಿದೆ. ಅವಳು ನನ್ನ ಜಾತಿಯವಳೇ ಆಗಿದ್ದಳು. ನೋಡುವುದಕ್ಕೆ ಮಸ್ತಾಗಿ ಕಾಣುತ್ತಿದ್ದಳು. ನನಗೋ ಅವಳೇನಾದರೂ ನನ್ನ ಆಟೋದಲ್ಲಿಯೇ ಪ್ರಯಾಣ ಮಾಡಿದರೆ ಚೆನ್ನಾಗಿರುತ್ತದೆ ಎಂದು ಕೊಳ್ಳುವಷ್ಟರಲ್ಲಿ ಅವಳೇ ನನ್ನೆಡೆಗೆ ಬಂದು ಬನಶಂಕರಿಗೆ ಬರುತ್ತೀರಾ ಎಂದು ಕೇಳಿಯೇ ಬಿಟ್ಟಳು. "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ" ಎಂಬಂತೆ ಬನ್ನಿ ಬನ್ನಿ ಎಂದು ಕೂರಿಸಿಕೊಂಡ ನಂತರ ಅಲ್ಲಿಂದ ಶುರುವಾಯ್ತು ನೋಡಿ ನನ್ನ ಲವ್ ಸ್ಟೋರಿ. ಆಕೆ ಹದಿಹರೆಯದ ೧೮ನೇ ವರ್ಷದವಳಾಗಿದ್ದಳು. ಬನಶಂಕರಿಯನ್ನು ೧/೨ ತಾಸು ನಿಧಾನವಾಗಿಯೇ ಬಳಸಿಕೊಂಡು ಉದ್ದಕ್ಕೂ ಮಾತನಾಡಿಸುತ್ತಾ  ಹೊರಟೆ. ಆಕೆಯೂ ಸಹ ನನ್ನ ಮಾತುಗಳಿಗೆ ಸ್ಪಂಧಿಸುತ್ತಾ ಮುಂದುವರೆದಳು. ಮೀಟರ್ ಬಿಲ್ ಬಗ್ಗೆ ತಲೆಕೆಡಿಸಿಕೊಳ್ಳದ ನಾನು ಯಾವ ಟ್ರಾಫಿಕ್ ಸಿಗ್ನಲ್ ಗೂ ಹೆದರದೆ ಸಿ.ಎಂ, ಪಿ.ಎಂ ಕರೆದುಕೊಂಡು ಹೋಗುವ ರೀತಿಯಲ್ಲಿ ರಾಣಿಯಂತೆ ಟ್ರಾಫಿಕ್ ಇಲ್ಲದ ರಸ್ತೆಗಳಲ್ಲಿ (ಗಲ್ಲಿ ಗಲ್ಲಿಗಳಲ್ಲಿ) ನುಗ್ಗಿಸಿಕೊಂಡು ಹೋದೆ. ಅವಳಿಗೂ ನಾನು ಆಟೋ ಓಡಿಸುವ ವೇಗ ಇಷ್ಟವಾಗಿತ್ತು. ಪದೇ ಪದೇ ನೀವು ಚೆನ್ನಾಗಿ ಓಡಿಸುತ್ತಿರಾ, ಚೆನ್ನಾಗಿದ್ದೀರಾ ಎನ್ನತೊಡಗಿದಳು.

ನನಗೋ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಿತ್ತು. ಚಿಕನ್ ಕಬಾಬ್ ಬಂದು ನೇರ ನನ್ನ ಬಾಯಿಗೆ ಬಂದಂತಿತ್ತು. ಇರಲಿ ಅಂದುಕೊಂಡು ಹೋಗುವಷ್ಟರಲ್ಲಿ ಬನಶಂಕರಿ ೨ನೇ ಹಂತ ಬಂದೇ ಬಿಟ್ಟಿತು. ಮತ್ತೆ ಅವಳನ್ನು ಕಳೆದುಕೊಂಡೆ ಎನ್ನುವಷ್ಟರಲ್ಲಿ ಅವಳೇ ಹೇಳಿದಳು, ಇನ್ನು ಮುಂದೆ ಇದೇ ಸಮಯಕ್ಕೆ ನನ್ನ ಕಾಲೇಜಿಗೆ ಬರುವುದಾದರೆ ನಾನು ನಿಮ್ಮ ಆಟೋದಲ್ಲಿಯೇ ಮನೆಗೆ ಹೋಗಬಹುದು ಎಂದಳು. ಅಲ್ಲಿಗೆ ಸುತ್ತೀ ಬಳಸಿ ನನಗೆ "ಗ್ರೀನ್ ಸಿಗ್ನಲ್" ಕೊಟ್ಟಂತಿತ್ತು. ಅವಳಿಗೆ ನನ್ನ ಬಗ್ಗೆ ಪ್ರೀತಿ ಇದೆ ಎಂದು ತಿಳಿದುಕೊಂಡೆ. ನಾನು ಮತ್ತೆ ನಾಳೆ ಅದೇ ಸಮಯಕ್ಕೆ ಕಾಲೇಜಿಗೆ ಹೋದರೆ ಪಾಗಲ್ ಎಂದುಕೊಳ್ಳುತ್ತಾಳೆ ಎಂದು ೩ ದಿನ ಬಿಟ್ಟು ಅದೇ ಸಮಯಕ್ಕೆ ಕಾಲೇಜಿನ ಮುಂದೆ ಕಾದು ನಿಂತೆ. ಹೀಗೆ ದಿನೇ ದಿನೇ ನೋಡುತ್ತಾ ನೋಡುತ್ತಾ ೩ ದಿನದ ಅಂತರದಿಂದ ೨ ದಿನದ ಅಂತರಕ್ಕೆ ಬಂದೆ. ಮತ್ತೆ ೨ ದಿನದ ಅಂತರದಿಂದ ದಿನ ನಿತ್ಯ ಹೋಗಲು ಪ್ರಾರಂಭಿಸಿದೆ. ಅಲ್ಲಿಗೆ ಒಂದು ರೀತಿಯಲ್ಲಿ ಪ್ರೀತಿಯ ಮಾಯೆಯಲ್ಲಿ ಸಿಕ್ಕಿಹಾಕಿಕೊಂಡೆ. ಊಟವನ್ನೂ ಮರೆತೆ, ನಿದ್ರೆಯನ್ನೂ ಮರೆತೆ, ಮನೆಯನ್ನೂ ಮರೆತೆ, ಕೊನೆಗೆ ಮಧ್ಯಾಹ್ನ ೧೨ ಘಂಟೆಯಾದರೆ ದುಡಿಮೆಯನ್ನೇ ಮರೆತುಬಿಟ್ಟೆ. ಯಾರಾದರೂ ಪ್ರಯಾಣಿಕರು ಬಂದರೆ "ಆಟೋ ಎಂಗೇಜ್ ಇದೆ, ವೈಟಿಂಗ್" ಎಂದು ಮುಂದಕ್ಕೆ ಕುಳುಹಿಸುತ್ತಿದ್ದೆ. ಅವಳೂ ಸಹ ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ಭಾವನೆಯಲ್ಲಿ ಅವಳಾಡುತ್ತಿದ್ದ ಮಾತುಗಳಿಗೆ ಮರುಳಾಗಿ ಬಿಟ್ಟಿಯಾಗಿ ೧ ರೂಪಾಯಿಯೂ ಸಹ ತೆಗೆದುಕೊಳ್ಳದೆ ಅವಳ ಮನೆಯವರೆಗೂ ಬಿಡತೊಡಗಿದೆ. ಅವಳಪ್ಪ ದೊಡ್ಡ ಬಿಸಿನೆಸ್ ಮ್ಯಾನ್. ಆದ ಕಾರಣ ಅವಳಿಗೆ ದುಡ್ಡಿಗೇನೂ ಕಡಿಮೆ ಇರಲಿಲ್ಲ. ಬೆಳಿಗ್ಗೆ ಬಸ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದು ಮಧ್ಯಾಹ್ನ ಕಾಲೇಜ್ ಮುಗಿಸಿದ ನಂತರ ನನ್ನ ಆಟೋನೆ ಬೇಕಾಗಿತ್ತು ಅವಳಿಗೆ. ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ನಿತ್ಯ ಎಸ್.ಎಂ.ಎಸ್. ಬೇರೆ ಕಳುಹಿಸುತ್ತಿದ್ದಳು. ದಿನ ನಿತ್ಯ ನಿಮ್ಮ ನೆನಪೇ ಬರುತ್ತಿದೆ ಎನ್ನತೊಡಗಿದಳು. ನನಗೂ ಸಹ ಅದೇ ಬೇಕಾಗಿತ್ತು. ಹೀಗೆ ದಿನ ಕಳೆದಂತೆ ಸತತವಾಗಿ ೬ ತಿಂಗಳು ಅವಳನ್ನು ಬಿಟ್ಟಿಯಾಗಿ ನನ್ನ ಹೆಂಡತಿಯೆಂದೇ ತಿಳಿದು ಅವಳನ್ನು ಪಿಕಪ್ ಮಾಡಲು ಹೋಗುತ್ತಿದ್ದೆ. ಅವಳೋ ಅವರ ಗೆಳತಿಯರನ್ನೂ ಸಹ ಪರಿಚಯ ಮಾಡಿಸಿ ನಮ್ಮ ಜೊತೆಯೇ ಬರುವ ಹಾಗೆ ಮಾಡುತ್ತಿದ್ದಳು. ಆಕೆಯ ಗೆಳತಿಯರೂ ಸಹ ನಿಮ್ಮ ಬಗ್ಗೆ ಈಕೆ ತುಂಬಾ ಹೇಳಿಕೊಳ್ಳುತ್ತಾಳೆ ಎನ್ನ ತೊಡಗಿದರು. ಸರಿ ಹಾಗಾದರೆ, ಹೆಚ್ಚೂ ಕಡಿಮೆ ನನಗನಿಸಿದ ಹಾಗೆಯೇ ನಡೆಯುತ್ತಿದೆ ಎಂದು ಒಂದು ದಿನ ಶನಿವಾರ ಅವಳನ್ನು ಯಾವುದಾದರೂ ಪಾರ್ಕಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಅವಳೂ ಸಹ ಬರುತ್ತೇನೆ ಆದರೆ ನನಗೆ ಐಸ್ ಕ್ರೀಮ್ ಕೊಡಿಸಿದರೆ ಮಾತ್ರ ಬರುತ್ತೇನೆ ಎಂದಳು. ಅಯ್ಯೋ ನೀನೆ ನನ್ನ ಹೆಂಡತಿ ನಿನಗೆ ನನ್ನನ್ನೇ ಕೊಟ್ಟಿದ್ದೇನೆ ಬಾ ಎಂದು ಮನಸ್ಸಿನಲ್ಲಿಯೇ ಅಂದು ಕೊಂದು ಹೊರಟೆ. ನಂತರ ಪಾರ್ಕಿನಲ್ಲಿ ಕುಳಿತುಕೊಂಡು ಕೆಲಹೊತ್ತು ಹರಟೆ ಹೊಡೆದೆವು. ಅವಳೇನೋ ನನಗೆ ಫೈವ್ ಸ್ಟಾರ್ ಚಾಕೋಲೆಟ್ ಕೊಟ್ಟಳು. ನಾನೂ ಸಹ ಅವಳಿಗೆ ಗ್ರೀಟಿಂಗ್ಸ್ ಒಂದನ್ನು ತಂದಿದ್ದೆ. ನನ್ನ ಮನಸ್ಸಿನ ಭಾವನೆಗಳನ್ನು ಅದರಲ್ಲಿ ವ್ಯಕ್ತಪಡಿಸಿದ್ದೆ. ನಾನವಳಿಗೆ ಇದರಲ್ಲಿ ಶಾಹಿರಿ ಬರೆದಿದ್ದೇನೆ ಮನೆಗೆ ತೆಗೆದುಕೊಂಡು ಹೋದನಂತರ ಓದಿ ಅದಕ್ಕೆ ಉತ್ತರವಾಗಿ ಸ್.ಎಂ.ಸ್ ಮಾಡು ಎಂದೆ.

ಓಕೆ ಎಂದ ಅವಳು ಮನೆಗೆ ಹೊರಟಳು. ಸಂಜೆಯಾದರೂ ಒಂದು ಫೋನ್ ಕೂಡ ಬಂದಿಲ್ಲ, ಅದಾದರೂ ಸ್.ಎಂ.ಸ್ ಕೂಡ ಬಂದಿಲ್ಲ. ಏನಾಗಿರಬಹುದು ಎಂದು ನಾನು ಫೋನ್ ಮಾಡಿದರೂ ಫೋನ್ ಪಿಕ್ ಮಾಡುತ್ತಿಲ್ಲ. ನನ್ನ ಸ್.ಎಂ.ಸ್ ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಮಟ್ಟಿಗೆ ಯೋಚನೆಯಲ್ಲಿ ಮುಳುಗಿದೆ. ನಾಳೆ ಕಾಲೇಜಿಗೆ ಹೋದರೆ ಕಾರಣ ಗೊತ್ತಾಗುವುದು ಎಂದು ಕಾಲೇಜಿಗೆ ಹೊರಟೆ.
ಅಲ್ಲವಳು ನನ್ನ ಕಡೆಯೂ ಗಮನ ಕೊಡದೆ ಕೋಪ ಮಾಡಿಕೊಂಡು ಮತ್ಯಾವುದೋ ಆಟೋದಲ್ಲಿ ಹೊರಟಳು. ಆ ದಿನ ನಾನು ಯಾವುದೇ ರೀತಿಯ ದುಡಿಮೆ ಮಾಡಲಿಲ್ಲ. ಬೆಳಿಗ್ಗೆ ೧೨ ಘಂಟೆ ಇಂದ ಸಂಜೆ ೫ ಘಂಟೆ ವರೆಗೂ ಆಟೋದಲ್ಲಿಯೇ ನಿದ್ರಿಸಿ ಮತ್ತೆ ಮರುದಿನ ಅವಳಲ್ಲಿ ಮಾತನಾಡಿ ಅದೇನಿರಬಹುದು ತಿಳಿಯಲೇ ಬೇಕೆಂದು ಕಾದು ಕುಳಿತೆ. ಅವಳು ಬಂದ ಕೂಡಲೇ ನಾನವಳಲ್ಲಿಗೆ ಹೋಗಿ ಕಾರಣವನ್ನು ಕೇಳಿದೆ. ಹಪಹಪಿಸಿದೆ. ಆದಕ್ಕವಳು ನಿಮ್ಮ ಗ್ರೀಟಿಂಗ್ಸ್ ನೋಡಿದೆ. ಬಟ್ ಈ ಪ್ರೀತಿ ಪ್ರೇಮ ನಮ್ಮಿಬ್ಬರಿಗೆ ಸರಿ ಹೊಂದುವುದಿಲ್ಲ. ನಮ್ಮಪ್ಪ ದೊಡ್ಡ ಬಿಸಿನೆಸ್ ಮ್ಯಾನ್. ಅವರು ಆಟೋ ಡ್ರೈವರ್ ಗೆ  ಕೊಟ್ಟು ಮದುವೆ ಮಾಡುವುದಿಲ್ಲ. ಅದೇನಿದ್ದರೂ ಕನಸೇ ಎಂದಳು. ಏನೋ ನಮ್ಮ ಜಾತಿಯ ಹುಡುಗನಾಗಿದ್ದರಿಂದ ನಾನು ನಿಮ್ಮೊಡನೆ ಸ್ನೇಹ ಬೆಳೆಸಿದೆ ಅಷ್ಟೇ ಎಂದಳು. ಅಲ್ಲಿಗೆ ನನ್ನ ಕಥೆ ಮುಗಿಯಿತು ಸ್ಸಾರ್ ಎಂದು ಕೊಂಡ ಡ್ರೈವರ್.

ನನಗೋ ಅಯ್ಯೋ ಎನಿಸಿತು. ಮುಂದೆ ಅವಳನ್ನು ಮಾತನಾಡಿಸಲಿಲ್ಲವಾ,? ಅವಳಿಗೆ ಫೋನ್ ಮಾಡಲಿಲ್ಲವಾ ಎಂದು ಕೇಳಿದೆ. ಅದಕ್ಕವನು ಸರಿಯಾಗಿಯೇ ಉತ್ತರ ನೀಡಿದ. ಸ್ಸಾರ್ ನಾನ್ಯಾಕೆ ಅವಳನ್ನು ಬಿಡಲಿ. ಕೂಲಿ ಮಾಡಿಯಾದರೂ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಎಷ್ಟೋ ಬಾರಿ ನನ್ನ ಅಮ್ಮಾಜಾನ್ ನನಗೆ ಮಂಡಿ ನೋವಿದೆ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗು ಎಂದರೂ ಪ್ರೀತಿಯಲ್ಲಿ ಮುಳುಗಿದ್ದ ನಾನು ನನ್ನ ಅಮ್ಮನ ನೋವನ್ನೂ ಲೆಕ್ಕಿಸದೆ ನಾಯಿಯ ಹಾಗೆ ಕಾಲೇಜಿನ ಮುಂದೆ ಕಾದು ಕುಳಿತೆ. ನನ್ನ ಹೆತ್ತ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ ಹೋಯ್ತಾ ಸ್ಸಾರ್ ಈ ಹುಚ್ಚು ಪ್ರೀತಿ. ಅವರೋ ಕಾಲು ನೋವಿನಿಂದ ಅಳುತ್ತಲೇ ಬೇರೊಂದು ಆಟೋದಲ್ಲಿ ಹೋಗುತ್ತಿದ್ದರು.

ನಾಯಿ ತರಹ ಕಾದು ಕುಳಿತು ಬಿಟ್ಟಿಯಾಗಿ ಅವಳ ಮನೆಗೆ ಡ್ರಾಪ್ ಹಾಕಿ ಬರುತ್ತಿದ್ದೆ. ಇಷ್ಟೆಲ್ಲಾ ಕಥೆಯಾದರೂ ನನ್ನ ಹುಡುಗಿಯನ್ನು ಬಿಡುತ್ತೀನಾ? ನನ್ನ ಅಪ್ಪ ಅಮ್ಮನಿಗೆ ಇವಳೇ ಸರಿಯಾದ ಸೊಸೆ ಎಂದು ನಿರ್ಧರಿಸಿ ಮತ್ತೆ ಅವಳ ಕಾಲೇಜಿಗೆ ಹೋಗಿ ಆಟೋ ಡ್ರೈವರ್ ನಂತೆ ಕರೆದುಕೊಂಡು ಹೋಗಲು ಪ್ರಾರಂಭಿಸಿದೆ. ಮೀಟರ್ ಗೆ ಸರಿಯಾದ ಹಣವನ್ನು ಅವಳಿಂದ ತೆಗೆದುಕೊಳ್ಳುತ್ತಿದ್ದೆ. ದಿನ ಕಳೆದಂತೆ ಅವಳಿಗೂ ಸಹ ನನ್ನ ಬಗ್ಗೆ ಪ್ರೀತಿ ಮೂಡತೊಡಗಿತು. ಆಟೋದಲ್ಲಿಯೇ ಕುಳಿತು ಅಳತೊಡಗಿದಳು. ಏನಾಯಿತು ಎಂದು ಕೇಳಲು ಅದಕ್ಕೆ ಅವಳು ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದೇನೆ. ನಿನ್ನನ್ನು ಬಿಟ್ಟು ಇರಲು ನನಗೆ ಆಗುತ್ತಿಲ್ಲ. ಆದರೆ ಮನೆ ಕಡೆ ನಾವು ಶ್ರೀಮಂತರಾಗಿದ್ದರಿಂದ ತೊಂದರೆ ಎದುರಿಸಬೇಕಾಗುತ್ತದೆ ಎಂದಳು. ಅದಕ್ಕೆ ನಾನು ಅಷ್ಟೇನಾ ತೊಂದರೆ ಇರುವುದು ಎದುರಿಸುವುದಕ್ಕೆ ಹೊರತು ಓಡಿಹೊಗುವಕ್ಕೆ ಅಲ್ಲ. "ಅಲ್ಲಾ" ಮೇಲೆ ಆಣೆ ಹಾಕಿ  ಹೇಳುತ್ತೇನೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ನನ್ನನ್ನು ಬಿಟ್ಟು ಹೋಗಬೇಡ 
ಎಂದು ಹೇಳಿದ.

ನೋಡೋಣ ಬಿಡಿ ಸ್ಸಾರ್ ದೊಡ್ಡವರ ಒಪ್ಪಿಗೆ ಪಡೆದು ಮದುವೆ ಆಗ್ತೀನಿ, ಆಗ್ಲಿಲ್ವಾ ಯಾರಿಗೂ ಹೇಳುವುದಿಲ್ಲ, ಅವಳನ್ನು ಎಲ್ಲಿಗಾದರೂ ಎತ್ತಾಕೊಂಡ್ ಹೋಗಿ ಮದುವೆ ಆಗಿ ಬರ್ತೀನಿ. ಸಧ್ಯಕ್ಕೆ ಇನ್ನೂ ೨ ವರ್ಷ ನಾನು ಅವಳನ್ನು ಬಿಟ್ಟಿಯಾಗಿ ನನ್ನ ಆಟೋದಲ್ಲಿ ಕೂರಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎನ್ನುವಷ್ಟರಲ್ಲಿ ನನ್ನ ಜಾಗ ಬಿ.ಟಿ.ಎಂ ಲೇ ಔಟ್ ಬಂದು ಬಿಟ್ಟಿತು. ಇಷ್ಟು ಕಥೆ ಕೇಳಿದ ನಾನು ಮೀಟರ್ ಮೇಲೆ ೧೦ರುಪಾಯಿ ಕೊಟ್ಟು ಮೊದಲು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ ಆಮೇಲೆ ಅವಳೇ ಬರುತ್ತಾಳೆ ಎಂದು ಬುದ್ಧಿ ಹೇಳಿ ನನ್ನ ಗೂಡಿಗೆ ಮರಳಿದೆ.

ಮಾಹಿತಿ :- ನೈಜ ಕಥೆಯ ಸಾರಾಂಶದಲ್ಲಿ ಏನೂ ಬದಲಾವಣೆಗಳು ಆಗಿಲ್ಲ. ಕೆಲವು ಸಂಧರ್ಭ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಣನೆಗೆ ತೆಗೆದುಕೊಂಡು ವಿವರಣೆಯಾಗಿ ಸ್ವಲ್ಪ ಮಟ್ಟಿಗೆ ಕಾಲ್ಪನಿಕ ಅಂಶಗಳನ್ನು ಕಥೆಗೆ ಹೊಂದುವಂತೆ ಬಳಕೆ ಮಾಡಿದ್ದೇನೆ.

Wednesday, May 18, 2011

ಒಡಲಾಸೆಯೆಲ್ಲ ಈಗ ಬಯಲಲ್ಲಿ ಇಟ್ಟ ಹಣತೆ

ಪ್ರೀತಿ ಹುಟ್ಟಿದ್ದಾದರೂ  ಹೇಗೆ?, ಈ ಪ್ರೀತಿ ಹುಟ್ಟುವುದಾದರೂ ಏತಕ್ಕೆ ? ಇದೊಂದು ವಿಸ್ಮಯವಲ್ಲವೇ?  
ಎಲ್ಲಿ ಒಲವಿದೆಯೋ ಅಲ್ಲಿ ಪ್ರೀತಿ ಮೂಡಲಿ, ಎಲ್ಲಿ ಮನಸ್ಸುಗಳು ಮಿಡಿಯುವುದೋ ಅಲ್ಲಿ ಪ್ರೀತಿ ಪಯಣ ಸಾಗಲಿ, ಎಲ್ಲಿ ಪ್ರೀತಿಗೆ ಅರ್ಥ ಸಿಗುವುದೋ ಅಲ್ಲಿ ಪ್ರೀತಿ ಪತಾಕೆ ವಿಜ್ರುಂಭಿಸಲಿ,   ಎಲ್ಲಿ ತಾರತಮ್ಯಗಳಿದೆಯೋ, ಎಲ್ಲಿ ನಕಾರಾತ್ಮಕ ಉತ್ತರದಿಂದ ಸಂಬಂಧಗಳು ತಿರುವು ಪಡೆಯುವುದೋ, ಅಲ್ಲಿ ಪ್ರೀತಿ ಏತಕ್ಕಾದರೂ ಮೂಡಬೇಕು? ಬಹುಷಃ ಗಂಡು ಹೆಣ್ಣನ್ನು ಸೃಷ್ಟಿಸಿದ ತ್ರಿಮೂರ್ತಿಗಳು ಕೊಂಚ ಹೆಣ್ಣಿನ ಸಲಹೆ ಪಡೆದು ಪ್ರೀತಿಯ ಬಗ್ಗೆ ಪಿ.ಎಚ್. ಡಿ ಮಾಡಿದ್ದರೆ ಜಗತ್ತಿನ ಮನುಕುಲವೆಲ್ಲ ಸುಧಾರಿಸುತ್ತಿತ್ತು.. ಆದರೂ ಬ್ರಹ್ಮ  ಸ್ವಲ್ಪ ಎಡವಟ್ಟು ಮಾಡಿಬಿಟ್ಟ.  


ಎಲ್ಲಿ ನೋಡಿದರಲ್ಲಿ ಪ್ರೀತಿಗಾಗಿ ವಿಷ ಕುಡಿದು ಸಾಯುತ್ತಿರುವ ಯುವಕ ಯುವತಿಯರು, ಎಲ್ಲಿ ನೋಡಿದರಲ್ಲಿ ಪ್ರೀತಿಗಾಗಿ ಹುಚ್ಚು ಹಿಡಿದು ತಮ್ಮ ಅಮೂಲ್ಯ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರೇಮಿಗಳು, ಇನ್ನು ಕೆಲವು ಅಸಹಾಯಕ ಹುಚ್ಚು ಪ್ರೇಮಿಗಳು ಆಸಿಡ್, ಚೂರಿ, ಮಾನಭಂಗ ಹಾಗು ನಿಮಾನ್ಸ್ ದಾರಿ ಹುಡುಕಿಕೊಂಡು ಹೊರಟವರು. ಪ್ರಪಂಚದ ಜನಗನತಿಯ ಪ್ರಕಾರ ಶೇಖಡ ೨೦ %ರಷ್ಟು ಬಹಿರಂಗವಾಗಿ ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ, ಆತ್ಮನಿಂದನೆ ನಡೆಯುತ್ತಿದ್ದರೆ, ಇನ್ನುಳಿದ ೩೦%ರಷ್ಟು ಒಳರಂಗದಲ್ಲಿ ಹಾಳಾಗಿ ಕಣ್ಮರೆಯಾಗುತ್ತಿದೆ.  
ನನ್ನ ಪ್ರಕಾರ ಹೇಳುವುದಾದರೆ ಪ್ರೀತಿಯೇ ದೇವರು, ಎಲ್ಲಿ ನಿಷ್ಕಲ್ಮಶ ಪ್ರೀತಿಯಡಗಿದೆಯೋ ಅಲ್ಲಿ ಸ್ಪಟಿಕದಂತಹ ಜೀವನವಿದೆ. 

ಅದೊಂದು ದೊಡ್ಡ ಕಥೆ, ಮೊದಮೊದಲು ನನ್ನಾಕೆಗೆ ಪರಿಚಿತವಾದಾಗ ಆ ನಗುವೇನೂ, ಆ ನಿಯತ್ತಿನ ಸ್ನೇಹವೇನೂ, ಅಬ್ಬಬ್ಬಾ, ಹೇಳೋಕೆ ಪದಗಳೇ ಇಲ್ಲವೇನೋ.. ಒಂದು ಹೊತ್ತೂ ಬಿಡುವುಕೊಡದೆ ಮಾತನಾಡುವುದು, ಒಬ್ಬರಿಗೊಬ್ಬರು ಕಾಳಜಿವಹಿಸುವುದು.. ಹುಹ್, ಅವಳೆಲ್ಲೋ ನಾನೆಲ್ಲೋ, ಆದರೂ ಈ ಎಸ್.ಎಂ.ಎಸ್ ಮೂಲಕ ಸಂಬಂಧಗಳ ಸರಪಳಿಯನ್ನು ಕೊಂಚ ಬಿಗಿ ಪಡಿಸಿಕೊಂಡಿದ್ದೆವು. ಪ್ರಪಂಚದ ಏಕೈಕ ಅಪಾಯಕಾರಿ ಮಾನವನಾಶ ವೈರಸ್ ಎಂದರೆ ಅದು ಈ ಉಚಿತ ಎಸ್.ಎಂ.ಎಸ್ ಎಂದೇ ಹೇಳಬಹುದು. ಯಾರ ಪ್ರೀತಿ ಯಾರ ಮೇಲೆ ಅದು ಹೇಗೆ ಹುಟ್ಟಿತೋ ನನಗೆ ಗೊತ್ತಿಲ್ಲ, ಆದರೆ ನನ್ನ ಜೀವನದ ಪಯಣದಲ್ಲಿ ಸಿಕ್ಕ ಏಕೈಕ ಹುಡುಗಿ ಅವಳೇ, ನನ್ನ ಮುದ್ದು ಕಂದಮ್ಮ.. ನನ್ನ ಬಂಗಾರಿ.. ಪ್ರಶಾಂತವಾಗಿದ್ದ ನನ್ನೆದೆಯಲ್ಲಿ ಕುಳಿತು ಪ್ರೀತಿಯೆಂಬ ಹಸಿರನ್ನು ಬಿತ್ತಿ ಹೋದವಳು. ಅವಳು ಅಕ್ಕರೆಯಿಂದ ತೋರಿದ ಪ್ರೀತಿ, ನನ್ನ ಬಗ್ಗೆ ಅವಳಿಗಿದ್ದ ಕಾಳಜಿ, ಆಕೆಯ ನಿಷ್ಕಲ್ಮಶ ಮನಸ್ಸು, ಆಕೆ ತನ್ನ ಬದುಕಿನ ಒಲವನ್ನೆಲ್ಲಾ ನನ್ನೊಬ್ಬನಿಗೇ ಧಾರೆಯೆರೆದು ಬಿಟ್ಟಿದ್ದಳು ಅನ್ನಿಸಿತ್ತು. ಆಗಾಗ ನಮ್ಮಿಬ್ಬರೊಡನೆ ನಡೆಯುತ್ತಿದ್ದ ಧೀರ್ಘ ಸಮಾಲೋಚನೆಗಳ ನಡುವೆಯೂ ತಿಳಿಯಾದ ನಗುವಿಟ್ಟು ನನ್ನ ಮನಸ್ಸನ್ನು ಕಲಕಿದ್ದಳು. ನನ್ನ ಜೀವನದ ಮಟ್ಟಿಗೆ ಇವಳನ್ನು ಪ್ರೀತಿಯ ದೇವತೆಯೆಂದೇ ಕರೆಯಬೇಕೋ, ಅಥವಾ ಪ್ರೀತಿಗೆ ತಾಯಿಯೆಂದು ಕರೆಯಬೇಕೋ ತಿಳಿಯದಾಗಿಹೋಗಿತ್ತು. 

ಬಹುಷಹ ನಾನು ಬದುಕಿ ಸಾಯುವುದಾದರೆ ಅದು ಇವಳೊಂದಿಗೆಯೇನೋ ಎಂದು ಕೊಂಡಿದ್ದೆ. ಎಲ್ಲಿ ಅತೀ ಪ್ರೀತಿಯಿರುತ್ತದೋ ಅಲ್ಲಿ ಅತೀ ನೋವಿರುತ್ತದೆ. ಎಲ್ಲಿ ಅತೀ ನೋವಿರುತ್ತದೋ ಅಲ್ಲಿ ಆತನ ಸುತ್ತ ಎಷ್ಟು ಕೋಟಿ ಜನರಿದ್ದರೂ ಅವನು ಒಬ್ಬಂಟಿಗ. ಒಬ್ಬಂಟಿಗನೇ... 

ಸವಿಸವಿಯಾಗಿದ್ದ ಸಂಬಂಧ ನಮ್ಮದು. ಬೆಳಗ್ಗಿನ ಕ್ಹಾಫಿಯಿಂದಯಿಡಿದು, ಮನೆ-ಮನಸ್ಸುಗಳ ಸಿಹಿ-ಕಹಿಗಳನ್ನು ಹಂಚಿಕೊಳ್ಳುತ್ತಿದ್ದೆವು. ಹೀಗಿರಬೇಕಾದರೆ ಎಲ್ಲೋ ಒಂದು ಕಡೆ ನನ್ನೆದೆಯ ಹೃದಯದಲ್ಲಿ ಆಕೆಯ ಒಲವು ನನಗೆ ತಿಳಿಯದೆಯೇ ಬೇರು ಬಿಟ್ಟಿತ್ತು..ಅದೆಷ್ಟು ಮಟ್ಟಿಗೆ ಎದೆಯಾಳಕ್ಕೆ ನಾಟಿತೆಂದರೆ ಜೀವನವೇ ಅವಳು, ಅವಳೇ ಜೀವನವೆಂಬಂತೆ ಮಾರುಹೋಗಿದ್ದೆ. ಮಾನಸಿಕವಾಗಿ ಅತಿಯಾಗಿ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆ ಇದಕ್ಕೆಲ್ಲ ಕಾರಣವಾಗಿತ್ತು. ಅವಳಿಲ್ಲದ ಗಳಿಗೆ ನಶ್ವರ, ಅವಳಿಲ್ಲದ ನಗುವು ನಶ್ವರ, ಒಂದು ಬಾರಿ ಆಕೆಯ ದನಿ ಕೇಳಿದರೆ ಅಂದು ಅದೆಷ್ಟೋ ಸಂಭ್ರಮ ಸಡಗರ. ಹುಚ್ಚಾಪಟ್ಟೆ ಪ್ರೀತಿ ಮಾಡಿದ್ದೆ....

ಮನುಷ್ಯ ಹುಟ್ಟುವುದೂ ಸಹಜ, ಸಾಯುವುದೂ ಸಹಜ ಆದರೆ ಜಗತ್ತಿನ ಇತಿಹಾಸದಲ್ಲಿ ಒಮ್ಮೆ ಹುಟ್ಟಿದ ಪ್ರೀತಿ ಇಂದಿಗೂ ಸತ್ತಿಲ್ಲ ಸಾಯುವುದೂ ಇಲ್ಲ.. ದಿನ ಕಳೆದಂತೆ ನನ್ನಲ್ಲಿದ್ದ ಸ್ನೇಹ ಪ್ರೀತಿಗೆ ಚಿಗುರೊಡೆಯತೊಡಗಿತು. ಇವಳೇ ನನ್ನ ಮಡದಿ ಎಂದು ನಿರ್ಧರಿಸಿಕೊಂಡೆ. ಅದೊಮ್ಮೆ ನಾನವಳಲ್ಲಿ ಹೋಗಿ ನನ್ನ ಪ್ರೀತಿಯ ಬಗ್ಗೆ ಮಂಡನೆ ಇಡುವುದಾಗಿ ನಿಶ್ಚಯಿಸಿಕೊಂಡೆ. ಹೇಗೂ ನಮ್ಮಿಬ್ಬರ ಸ್ನೇಹವು ಭದ್ರ ಬುನಾದಿಯಂತೆ ಬಿಗಿದಿಡಿದಿದ್ದರಿಂದ ಅವಳಿಗೆ ನನ್ನ ಪ್ರೀತಿಯ ಬಗ್ಗೆ ಹೇಳಿಕೊಳ್ಳಲು ಭಯವುಂಟಾಗಲಿಲ್ಲ. ಅಂದು ಜೂನ್ ೨೦೦೭, ನಾನವಳಿಗೆ ಎಸ್.ಎಂ.ಎಸ್ ಮೂಲಕವೇ ನನ್ನ ಪ್ರೀತಿಯ ಬಗ್ಗೆ ಹೇಳಿಕೊಂಡೆ. ಎದೆಷ್ಟೋ ಬಾರಿ ನಾನು ಸ್ವತಹ ಅವಳಲ್ಲಿಗೆ ಹೋಗಿ ಮುಖಾನುಮುಖಿ ಕುಳಿತು ಪ್ರೀತಿಯ ಬಗ್ಗೆ ಹೇಳಿಕೊಳ್ಳಬೇಕೆನ್ನಿಸಿದ್ದರೂ ಸಂಧರ್ಭ ನನ್ನನ್ನು ದೂರವಿಟ್ಟಿತ್ತು. ಆಕೆ ನನ್ನ ಎಸ್.ಎಂ.ಎಸ್ ನೋಡಿದಕೂಡಲೇ, ನನಗೆ ನಿಮ್ಮ ಬಗ್ಗೆ ಆ ರೀತಿಯ ಭಾವನೆಗಳೂ ಯಾವುದೂ ಇಲ್ಲ ಎಂದಳು. ನಾವಿಬ್ಬರೂ ಸ್ನೇಹಿತರಾಗಿದ್ದೇವೆ, ಸ್ನೇಹಿತರಾಗೇ ಇರೋಣ ಎಂದು ಕೈಬಿಟ್ಟಳು. ನನಗ್ಯಾಕೋ ದುಃಖ ತಡೆಯೋಕೆ ಆಗಲಿಲ್ಲ. ಅವಳನ್ನು ಬೇರೊಬ್ಬನಿಗೆ ಬಿಟ್ಟುಕೊಡಲು ಮನಸ್ಸು ಒಪ್ಪಲಿಲ್ಲ. ನನ್ನೆದೆಯ ಗೂಡಿನಲ್ಲಿ ಅವಳನ್ನು ಭದ್ರವಾಗಿ ಬಚ್ಚಿಟ್ಟುಕೊಂಡಿದ್ದೆ. ಆ ಪರಿಸ್ಥಿಯಲ್ಲಿ ನಾನು ಅವಳಿಂದ ದೂರವಿರಲೂ ಆಗದೆ ಹತ್ತಿರವಿರಲೂ ಆಗದೆ ಕೊಂಚ ತಲೆ ಕೆಡಿಸಿಕೊಂಡೆ. ನನ್ನವಳ ಮಡಿಲಿನಲ್ಲಿ ಹಸುಕಂದಮ್ಮನಂತೆ ತಲೆಯಿಟ್ಟು ಅಳಬೇಕೆಂದೆನಿಸಿತ್ತು.ಆಗ ನಮಗೇನೂ ಮದುವೆಯ ಸಮಯ ಬಂದಿರಲಿಲ್ಲ. ತುಂಬಾ ದಿನ ಯೋಚನೆ ಮಾಡಿದ ನಾನು ಕೊಂಚ ಸಮಯ ಪ್ರೀತಿಯನ್ನು ಸೈಡಿಗಿಟ್ಟು ಅವಳ ಸ್ನೇಹಿತನಾಗಿಯೇ ಇರಲು ಪ್ರಯತ್ನಿಸಿದೆ. ಹಪಹಪಿಸಿದೆ. ಆದರೆ ಒಮ್ಮೆ ಹುಟ್ಟಿದ ಪ್ರೀತಿ, ಒಮ್ಮೆ ಮೂಡಿದ ಒಲವು ಮತ್ತೆ ಸ್ನೇಹಕ್ಕೆ ಹಿಂತಿರುಗಲು ಹಿಂದೇಟು ಹಾಕಿತ್ತು. ಎಷ್ಟೋ ಬಾರಿ ನನ್ನ ಆಸೆಗಳನ್ನು, ಬಯಕೆಗಳನ್ನು ಮನಸ್ಸಿನಲ್ಲಿಯೇ ಸಾಯಿಸಿಕೊಂಡು ಅವಳೊಡನೆ ಸ್ನೇಹಿತನಾಗಿರಲು ಪ್ರಯತ್ನಿಸಿದರೂ ನನ್ನ ಮಾತನ್ನು ಕೇಳದ ಪ್ರೀತಿ ಪ್ರತೀ ಕ್ಷಣವನ್ನು ಅವಳ ನೆನಪಲ್ಲೇ ಇರುವ ಹಾಗೆ ಮಾಡಿತ್ತು. ಭಾವುಕನಾಗಿ ಹೇಳಬೇಕೆಂದರೆ ಈ ನನ್ನ ಪ್ರೀತಿಯ ಹಾದಿಯಲ್ಲಿ ಎಷ್ಟೇ ನೊವಿದ್ದರೂ ಒಂದು ರೀತಿಯ ಕಹಿಯಾದ ಸಿಹಿಯಡಗಿತ್ತು. ಎಲ್ಲೋ ಒಂದು ಬಾರಿ ಆಕೆ ನನ್ನವಳಾಗುತ್ತಾಳೆ, ನನ್ನೆದೆಯ ಮೇಲೆ ಮಲಗಿ ಗುಬ್ಬಿಯಂತೆ ಬಚ್ಚಿಟ್ಟುಕೊಳ್ಳುತ್ತಾಳೆ ಎಂದುಕೊಂಡಿದ್ದೆ. ಸ್ನೇಹಿತರಾಗಿಯೇ ಸಾಗುತ್ತಿದ್ದ ನಮ್ಮ ಬದುಕಿನ ಮಧ್ಯ ಆಗಾಗ ಅಚಾನಕವಾಗಿ ಪ್ರೀತಿಯ ಬಗ್ಗೆ ಚರ್ಚೆಗಳು ಬರತೊಡಗಿದವು. ಮತ್ಯಾಕೋ ತಲೆಕೆಡಿಸಿಕೊಂಡ ನಾನು ಅವಳನ್ನು ಕೇಳಿಕೊಂಡ ರೀತಿಗಳಿಲ್ಲದ ರೀತಿಯಲ್ಲಿ ಬೇಡಿಕೊಂಡೆ. ಒಂದು ರೀತಿಯಲ್ಲಿ ದೇವದಾಸನೆ ಆಗಿಹೋದೆ. ಪ್ರೀತಿಯ ಬಿಕ್ಷುಕನಾಗಿಹೋದೆ. ಪದೇ ಪದೇ ನನ್ನವಳ ನಗು, ನನ್ನವಳ ದನಿ ನನ್ನನ್ನು ಸುತ್ತುವರಿದಿತ್ತು. ಆಕೆಯನ್ನು ನಾನು ಅದೆಷ್ಟು ಕೇಳಿಕೊಂಡರೂ ಗಮನಕೊಡದೆ, ನನಗೆ ಪ್ರೀತಿಯ ಬಗ್ಗೆ ಕೊಂಚವೂ ಆಲೋಚನೆಗಲಿಲ್ಲ, ಅದರ ಬಗ್ಗೆ ನಂಬಿಕೆ ನನಗಿಲ್ಲ, ಅದು ಅಪ್ಪ ಅಮ್ಮನಿಗೆ ಬಿಟ್ಟಿದ್ದು ಎಂದು ನಿರ್ಲಕ್ಷಿಸಿದ್ದಳು. ಹೀಗೆ ಬದುಕಿನ ಜಂಜಾಟದಲ್ಲಿ ನನ್ನಾಕೆಯ ಪ್ರೀತಿಗಾಗಿ ಕಾಯುತ್ತ ಕಾಯುತ್ತ ನನ್ನ ಪ್ರೀತಿಗೆ ೩ ವರ್ಷ ತುಂಬಿತ್ತು. ಪದೇ ಪದೇ ನನ್ನಾಕೆಯ ಪ್ರೀತಿಗಾಗಿ ಕಾಲು ಜಾರಿ ಬೀಳುತ್ತಿದ್ದ ನನಗೆ ಅದೊಂದು ದಿನ ನಮ್ಮಿಬ್ಬರ ನಡುವೆ ಎಸ್.ಎಂ.ಎಸ್ ಮೂಲಕ ಮಹಾಯುದ್ಧವೇ ನಡೆದು ಹೋಗಿತ್ತು.  ನಿಯತ್ತಿನ ಪ್ರೀತಿಗೆ ಬೆಲೆಯಿಲ್ಲದಂತಾಯಿತು.

ಎಲ್ಲಿ ಪ್ರೀತಿಗೆ ಬೆಲೆಯಿಲ್ಲವೋ ಅಲ್ಲಿ ನಾನಿರುವುದೂ ಬೇಡ, ಮತ್ತೆ ಮತ್ತೆ ನನ್ನಾಕೆಗೆ ತೊಂದರೆ ಕೊಡುವುದು ಬೇಡವೆಂದು ನಿರ್ಧರಿಸಿ ನಿರ್ಜೀವ ವಸ್ತುವಂತಾಗಿ ದೂರವಾದೆ. ಆದರೂ ಎದೆಯಾಳದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಸ್ಪಟಿಕದಂತಹ ನಂಬಿಕೆ ನನ್ನನ್ನು ಕಾಡುತ್ತಿತ್ತು. ಒಂದಲ್ಲಾ ಒಂದು ದಿನ ನನ್ನಾಕೆ ನನಗಾಗಿ ಬಂದೇ ಬರುತ್ತಾಳೆ ಎಂದು ಕಾದುಕುಳಿತೆ.


ಹೀಗೆ ಒಂದು ವರ್ಷ ಕಳೆದುಹೋಯಿತು. ಜೀವನದ ಶೈಲಿ ಹಾವಭಾವ ಸ್ವಲ್ಪ ಮಟ್ಟಿಗೆ ಬದಲಾವಣೆಯಾಯಿತು. ಅವಳಿಂದ ಕಲಿತ ಕೆಲವು ಪಾಠಗಳನ್ನು ಜೀವನಕ್ಕೆ ಅಳವಡಿಸಿಕೊಂಡೆ. ಹೀಗಿರಬೇಕಾದರೆ ಒಂದು ವರುಷದ ನಂತರ ಅಚಾನಕವಾಗಿ ನನಗೊಂದು ಎಸ್.ಎಂ.ಎಸ್ ಬಂತು. ಯಾವುದೋ ಅನ್-ನೋನ್ ನಂಬರ್ ಹಾಗಿತ್ತು. ಒಂದು ಕ್ಷಣ ಆ ಎಸ್.ಎಂ.ಎಸ್ ನೋಡಿದ ಕೂಡಲೇ ಧಿಗ್ಬ್ರಾ೦ತನಾಗಿ ಹೋದೆ. ಕಣ್ಣೀರನ್ನು ಕಾಣದೆ ಇದ್ದ ನನ್ನ ಕಣ್ಣುಗಳು ಕಣ್ಣೀರಿಂದ ಮುಳುಗಿತು (ಆನಂದಭಾಷ್ಪ ಹರಿಯಿತು). ಒಂದು ರೀತಿಯ ಅಚ್ಚರಿಯಾಗಿತು ಆ ಸಮಯದಲ್ಲಿ ನನ್ನನ್ನು ನಾನೇ ಮರೆತೇ. ಆ ದಿನ ನನ್ನ ಹುಡುಗಿ, ನನ್ನ ಕನಸಿನ ಮಡದಿ ನನಗೆ ಎಸ್.ಎಂ.ಎಸ್ ಮಾಡಿದ್ದಳು. ಆ ದಿನ ನನಗೆ ಎಲ್ಲಿಲ್ಲದ ಆನಂದ ಹಾಗು ಭಯ. ಮತ್ತೆ ನನ್ನಾಕೆ ಎಲ್ಲಿ ನನ್ನನ್ನು ಬಿಟ್ಟು ಹೋಗುತ್ತಾಳೋ ಎನ್ನುವ ಭಯ ನನ್ನನ್ನು ಕಾಡುತ್ತಿತ್ತು. ಆ ಒಂದು ವರುಷದಲ್ಲಿ ನಮ್ಮಿಬ್ಬರ ಜೀವನದಲ್ಲಿ ಹಾದುಹೋದ, ಬಯಸಿ ಹೇಳಬಹುದಾದಂತಹ ನೆನಪುಗಳನ್ನು ಹಂಚಿಕೊಂಡೆವು. ಒಂದು ರೀತಿಯಲ್ಲಿ ಆ ಸಮಯ ಸರಿಸುಮಾರು ಸಂಜೆಯ ವೇಳೆ.  ದೇವತೆಗಳು ದಿನದ ಅಂತ್ಯದಲ್ಲಿ ಅಸ್ತು ಎಂದು ಜಗತ್ತಿಗೆ ಹರಸುವ ಸಮಯ. ಆ ದೇವತೆಗಳ ಗುಂಪಲ್ಲಿದ್ದ ನನ್ನಾಕೆ ನನಗಾಗಿಯೇ ಅಂದು ಕೆಳಗಿಳಿದು ಬಂದಂತಿತ್ತು. ಒಂದು ವರುಷದ ಅಂತರದಲ್ಲಿ ನನ್ನಾಕೆ ನನಗೆ ಸಿಕ್ಕಿರೋದೆ ನನಗೆ ಹೆಚ್ಚಾಗಿಹೋಗಿತ್ತು. ಮತ್ತೆಂದೂ ಅವಳನ್ನು ಬಿಟ್ಟುಕೊಡದವನಾಗಿ ನಿರ್ಧರಿಸಿದೆ. ಮತ್ತೆ ನಮ್ಮಿಬ್ಬರ ಜೀವನ ಹಿಂದಿನಂತೆಯೇ ಹಸನಾಗಿ ಸಾಗಿತ್ತು. ಅವಳಿಗಾಗಿ ಅವಳ ಓದಿಗಾಗಿ ಹರಕೆ ಹೊತ್ತುಕೊಂಡೆ. ಕನಸ್ಸಿನಲ್ಲಿಯೂ ಅವಳ ಬಗ್ಗೆ ಕನವರಿಸುವ ರೀತಿಯಲ್ಲಿ ಅವಳನ್ನು ಅತಿಯಾಗಿ ಪ್ರೀತಿಸಿಬಿಟ್ಟೆ. ನನ್ನಾಕೆಯ ನಡೆನುಡಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿತ್ತು. ನನ್ನ ಪ್ರೀತಿ ನನಗೆ ಮತ್ತೆ ಸಿಕ್ಕಿತೆಂಬ ಸಂಭ್ರಮದಲ್ಲಿ ಇರಬೇಕಾದರೆ ಮತ್ತೆ ವಿಧಿ ನಮ್ಮಿಬ್ಬರ ಬಾಳಿನಲ್ಲಿ ಉಳಿಯಿಂಡಿತ್ತು. ಅವಳಿಗೆ ನನ್ನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಅದೇ ಹಳೇ ಪುರಾಣ ಪ್ರಾರಂಭವಾಯಿತು. ನಾನು ಬಂದಿದ್ದು ನಿಮ್ಮನ್ನು ಸ್ನೇಹಿತನನ್ನಾಗಿ ಪರಿವರ್ತಿಸಲೆಂದು ಹೇಳತೊಡಗಿದಳು. ನನ್ನ ಮನಸ್ಸಿನಲ್ಲಿ ಆ ರೀತಿಯ ಭಾವನೆಗಳಿದ್ದರೆ ನಾನು ಹೇಳುತ್ತಿದ್ದೆ ಆದರೆ ಆ ರೀತಿಯ ಭಾವನೆಗಳೇ ಹುಟ್ಟುತ್ತಿಲ್ಲ ಎಂದಳು.  ಒಂದು ವರ್ಷ ಹೇಗೋ ಅವಳಿಲ್ಲದೆ ಅವಳ ನೆನಪಿನಲ್ಲಿ ಕಾಲಕಳೆದಿದ್ದ ನನಗೆ ಮತ್ತೆ ಕಗ್ಗತ್ತಲೆಯಂತಿದ್ದ ಜೀವನಕ್ಕೆ ಬೆಳಕಿಡಿದು ದೀಪವನ್ನು ನಂದಿಸಿ ನನ್ನನ್ನು ಮಾರ್ಗ ಮಧ್ಯ ಬಿಟ್ಟು ಹೋದಂತಿತ್ತು. ಅವಳನ್ನು ಎಷ್ಟೋ ಕೇಳಿಕೊಂಡೆ. ಇಷ್ಟು ದಿನದ ಸಮಯದಲ್ಲಿ ನಾನು ನಿನಗಾಗಿಯೇ ನಿನ್ನ ನೆನಪಿನಲ್ಲಿ ಬದುಕಿರುವುದಾಗಿ ಹೇಳಿದೆ. ಆದರೂ ಅವಳು ನಕಾರಾತ್ಮಕ ಉತ್ತರಗಳನ್ನು ಕೊಡಲು ಪ್ರಾರಂಭಿಸಿದಳು. ನನಗ್ಯಾಕೋ ಎಲ್ಲೋ ಒಂದು ಕಡೆ ನಾನು ಪ್ರೀತಿ ಮಾಡುವ ರೀತಿಯೇ ಸರಿಯಿಲ್ಲವೇನೋ ಎಂದೆನಿಸಿತು. ನನ್ನ ಪ್ರೀತಿ ಅವಳಿಗೆ ಸರಿಯಾಗಿ ದಕ್ಕುತ್ತಿಲ್ಲವೇನೋ, ನನ್ನ ಬಚ್ಚಿಟ್ಟ ಕನಸುಗಳ ಭಾವನೆಗಳನ್ನು ಎಷ್ಟು ಬಿಚ್ಚಿಟ್ಟರೂ ಅದಕ್ಕೆ ಅರ್ಥವಿಲ್ಲವೇನೋ ಅನಿಸಿತ್ತು. ಪದೇ ಪದೇ ದೇವರು ನನಗೆ ಸರಿಯಾಗಿಯೇ ಚಡಿಯೇಟುಕೊಡುತ್ತಿದ್ದ.

ಹೌದೂಊಊಊ....? ದೇವರನ್ನು ನಾವೇಕೆ ಗ್ರೇಟ್ ಎನ್ನುತ್ತೇವೆ ಗೊತ್ತಾ ? 

ನನ್ನ ಪ್ರಕಾರ ಮನುಷ್ಯ ಹಂಬಲಿಸಿದ್ದನ್ನು, ಬೇಡಿಕೊಂಡಿದ್ದನ್ನು ಕೊಡದೇ, ಎಲ್ಲೋ ಒಂದು ರೀತಿಯಲ್ಲಿ ಜೀವನಕ್ಕೊಂದು ದಾರಿಮಾಡಿ ಕೊಡುತ್ತಾನಲ್ಲಾ ಅದಕ್ಕೆ ಅವನನ್ನು ಗ್ರೇಟ್ ಎಂದು ಕರೆಯುತ್ತೇವೆ ಎನುವ್ವುದು ನನ್ನ ಅಭಿಪ್ರಾಯ.
ಕೇಳಿದ್ದೆಲ್ಲ ಬೇಡ. ಆದರೆ ನನ್ನ ಹುಡುಗಿಯನ್ನು ನನಗೆ ಕೊಡಲು ಆ ದೇವರಿಗೆ ಸಾಧ್ಯನಾ? ಅಪ್ಪ ಅಮ್ಮನ ಪ್ರೀತಿ ಕೊಟ್ಟ, ಸ್ನೇಹಿತರ ಪ್ರೀತಿ ಕೊಟ್ಟ, ಬಂಧು-ಬಳಗದವರ ಪ್ರೀತಿ ಕೊಟ್ಟ, ಆದರೆ ನನ್ನ ಹುಡುಗಿಯ ಪ್ರೀತಿಯನ್ನು ಕೊಡಲು ಸಾಧ್ಯನಾ?

ಪ್ರೀತಿ ಮಾಡಿಯೇ ಮದುವೆಯಾಗಬೇಕೆಂಬ ಹುಚ್ಚೇನೂ ಇಲ್ಲ, ಆದರೆ ಒಂದಲ್ಲಾ ಒಂದು ದಿನ ಆಕೆ ನನ್ನವಳಾದರೆ ನನಗೆ ಅಷ್ಟೇ ಸಂತೋಷ. ಕೊನೆಗೂ ನಾನು ಅವಳನ್ನು ಅವಳಿಷ್ಟದಂತೆಯೇ ಬಿಟ್ಟು ಹೊರಬಂದೆ. ಆದರೆ ಅಚಾನಕವಾಗಿ ಮಧ್ಯವರ್ತಿಯಾಗಿ ಬಂದ ಹಿತೈಶಿಯೊಬ್ಬರು ಅಷ್ಟೊಂದೇನೂ ತಲೆಕೆಡಿಸಿಕೊಳ್ಳಬೇಡ.,  ಅವಳಿಲ್ಲದಿದ್ದರೆ ಮತ್ತೊಬ್ಬಳು (ಅವಳಿಗಿಂತ ಅನ್ದವಾಗಿರೋ, ಬುದ್ಧಿವಂತೆ)  ಸಿಗುತ್ತಾಳೆ ಎಂದು ಹೇಳಿದರು.


ನಿಜ, ನಾನು ಅವರು ಹೇಳಿದಂತೆಯೇ ಇರಬಹುದಿತ್ತು. ಬೇರೊಂದು ಪ್ರೀತಿಯನ್ನು ಹುಡುಕಬಹುದಿತ್ತು. ಆದರೆ ನಾನು ಮಾಡುತ್ತಿರುವ ಪ್ರೀತಿ "ಶೋಕಿಗಾಗಿ" ಅಲ್ಲ.  ಪ್ರೀತಿ ಶೋಕಿಯಾಗಿದ್ದರೆ ಅವಳನ್ನು ಬಿಟ್ಟು ಇನ್ನೊಬ್ಬಳ ಹಿಂದೆ ಓಡುತ್ತಿದ್ದೆ. ನನ್ನ ಪ್ರೀತಿಗೆ ಒಂದು ಪ್ರತ್ಯೇಕವಾದ ಬೆಲೆಯಿದೆ. ಆ ಪ್ರೀತಿಯ ನೆನಪಲ್ಲೇ ಬದುಕುತ್ತೇನೆ. ಕೊನೆಯದಾಗಿ ಅವಳೆಂದಿಗೂ ನನ್ನವಳೇ.. ಪುಟಾಣಿ ಕಂದಮ್ಮ ತನ್ನ ಕಾಲಿನಿಂದ ನನ್ನೆದೆಯನ್ನು ಎದೆಯನ್ನು ತುಳಿದಂತೆ..... ಅವಳು ನನಗೆ ಸಿಗದಿದ್ದರೂ ನನ್ನ ಪ್ರೀತಿ ಎಂದಿಗೂ ಸಾಯುವುದಿಲ್ಲ..

ಉಸಿರಾಗಿ ಬಂದವಳೇ ಉಸಿರನ್ನು ಕೊಲ್ಲದಿರು
ಹಸಿರಾಗಿ ನಿಂತವಳೇ ಹೆಸರನ್ನು ಕೆಡಿಸದಿರು
ಬದುಕಿರುವ ಕ್ಷಣಗಳಲಿ ಬದುಕಾಗಿ ಬಂದುಬಿಡು
ನಿನ್ನೆದೆಯ ಗೂಡಿನಲ್ಲಿ ನನಗಿಷ್ಟು ಜಾಗವಿಡು......

______________________________
ಒಂದೇ ಒಂದು ಹನಿ ವಿಷ ಉಣಿಸಿದರೆ ಸಾಕು ಗೆಳತಿ
ನಿನ್ನ ನೆನಪಿನ ಅಂಗಳದಲ್ಲಿ ನನ್ನ ಉಸಿರನು ತೇಯುವೆ. 
ಕೊನೆಗಾಲದ ನನ್ನ ನಗುವ ನಾ ಕಂಡು ಸಂತಸದಿಂದ ಕಣ್ ಮುಚ್ಚುವೆ. 

ನಿನ್ನ ಪ್ರೀತಿಯ........ ಸ್ನೇಹದ ಮಡಿಲು ಸುನಿಲ್.... ಲವ್ ಮಿ ವೆನ್ ಐ'ಮ್ ಗಾನ್

Thursday, January 13, 2011

ನನ್ನ ನೆಚ್ಚಿನ ಶಿಕ್ಷಕರು

ಓದಿ ಕಲಿತ ಶಾಲೆಗಿಂದು
ಶಿರವ ಬಾಗಿ ನಮಿಸಿರಿಂದು
ಬದುಕ ಕೊಟ್ಟು ಬೆಳೆಸಿದಂತ
ದೇವರೀರ್ವರು, ನಮ್ಮ ದೇವರೀರ್ವರು

ಎಳೆಯ ಮೊಗ್ಗಿನಂತ ನಮಗೆ
ಸುಧೆಯ ತುಂಬಿ ಬಿಟ್ಟುದೆಡೆಗೆ
ಜಗದ ಮಡಿಲಿಗಿಟ್ಟು ನಲಿದ
ದೇವರೀರ್ವರು, ನಮ್ಮ ದೇವರೀರ್ವರು

ಜ್ಞಾನ ಜ್ಯೋತಿ ಬೆಳಗಿಸುತಲಿ
ಸುಜ್ಞಾನದಿಂದ ಸವಿಯ ನುಡಿದು
ಆಟಪಾಠದಲ್ಲಿ  ಬೆರೆತು, ನಗಿಸಿ ನಗುವ 
ದೇವರೀರ್ವರು, ನಮ್ಮ ದೇವರೀರ್ವರು 

ಮಾತಿನಲ್ಲಿ ಕಪಟವಿಲ್ಲ
ತಾಳ್ಮೆಗಿವರು ಪವಿತ್ರರೆಲ್ಲ
ಪೂಜ್ಯರಿವರ ಚರಣಗಳಿಗೆ
ಜನುಮಪೂರ ನಮನವು, ಹೃದಯಪೂರ್ವ ನಮನವು

ಮತ್ತೆ ಬರಲಿ ಜನುಮವೊಂದು
ನಿಮ್ಮನಗಲದಂತೆ ನಾವು
ಜಿಗಿದು ಕುಣಿದು ಬ್ಯಾಗನೊತ್ತು
ಶಾಲೆಯತ್ತ ಬರುವೆವು, ನಿಮ್ಮ ಒಡಲ ಸೇರ್ವೆವು...