Saturday, May 22, 2021

ವಿಠ್ಠಲನ ಹುಡುಕುತ್ತಾ

ನನ್ನ ವಿಠ್ಠಲನನ್ನು ಹುಡುಕುತ್ತಾ -

ಮುಗಿಲೆತ್ತರಕ್ಕೆ ಬೆಳೆದು ನಿಂತು
ಆಕಾಶಕ್ಕೆ ಚುಂಬಿಸುತ್ತಿರುವ ಶಿಖರಗಳೇ
ಕಂಡಿರಾ ಆ ನನ್ನ ಅಂಭುಜನಾಭವನ್ನು?

ಕಲ್ಲು ಮುಳ್ಳು ಗುಡ್ಡಗಳ ಜೊತೆ
ಸ್ನೇಹವಂಚಿಕೊಂಡು ಬದುಕುತಿಹ
ಕಾಡು ಮೃಗ ಸರಿಸೃಪಗಳೇ 
ಬಲ್ಲಿರಾ ಎಲ್ಲಿಹನು ನನ್ನ ವಾಸುದೇವನನ್ನು?

ಹೆಂಗಳೆಯರ ಕೇಶರಾಶಿಯೊಡನೆ 
ಸದಾ ಚಿತ್ತಾರಮಯ ಪರಿಮಳ ತುಂಬಿಹ ಹೂಗಳೇ
ಕಂಡಿರಾ ಆ ಸ್ತ್ರೀಲೋಲ ಕೃಷ್ಣಪರಮಾತ್ಮನನ್ನು??

ನೀರೊಳಗಲಿ ಬದುಕುತಿಹ
ಜಲಾಚರ ಜೀವಜಂತುಗಳೇ
ಕಂಡಿರಾ ನನ್ನ ವಿಠ್ಠಲ ದೇವನನ್ನು?

ಕೊಂಬೆ ರೆಂಬೆಗಳಿಗೆ ಹಾರಿ
ಊರೂರು ನೋಡುತಿಹ ಹಕ್ಕಿಗಳೇ
ಕಂಡಿರಾ ನನ್ನ ಲೋಕೋದ್ಧಾರಕನನ್ನು?

ತಾಯಿ

ಹೆತ್ತು ಹೊತ್ತು ಮುತ್ತಿಟ್ಟು
ಸೆರಗಿಟ್ಟು ಹರಸಿ ಬೆವರೊರೆಸಿ
ಹಾಲುಣಿಸಿ ಬೆಳೆಸಿ ಬದುಕರ್ಧವ
ಮುಡಿಪಿಟ್ಟು ಹಗಲೆನದೆ ಇರುಳೆನದೆ
ತನ್ನೊಳಗಿನ ಕನಸನ್ನ ನಮ್ಮೊಳಗಲಿ
ಹೊರತಂದು ಬೆಳಕಂತೆ ದಾರಿ
ತೋರಿಸುವ ಮೊದಲ ದೇವರವಳು - ತಾಯಿ