Thursday, February 12, 2009

ಯಾರು ಹೊಣೆ?


ಕನಸುಗಳೂ ನನ್ನದೇ, ನೋವುಗಳೂ ನನ್ನದೇ

ಏನಿಹುದು ಈ ಬಾಳ ಲಹರಿಯಲಿ
ಪ್ರೀತಿ ಬಿತ್ತಿ, ಮೊಳಕೆಯೊಡೆಸಿ, ಕತ್ತಲೆರಚಿ
ಬೆನ್ನ ನೂಕೋ ಈ ವಿಧಿಗೆ ಯಾರು ಹೊಣೆ?

ಹುಟ್ಟು ಅವಳೇ, ಸಾವು ಅವಳೇ

ಮೋಹ ನಗೆಯ ಚೆಲ್ಲಿದವಳೇ
ತನು ಮನದಲಿ ಕುಳಿತಳವಳೇ
ಊಟ, ನಿದ್ದೆ ಕಸಿದುಕೊಂಡ ಈ ಸ್ಥಿತಿಗೆ ಯಾರು ಹೊಣೆ?

ಹಗಲು ಅವಳೇ, ಇರುಳು ಅವಳೇ
ಹೊಂಬೆಳಕಿನ ಧ್ಯಾನ ಅವಳೇ
ದೇವರಿಲ್ಲ ಕುಳಿತಳವಳೇ
ಎತ್ತ ನೋಡಿದರೆತ್ತ ಅವಳೇ.. ಈ ರೀತಿಗೆ ಯಾರು ಹೊಣೆ?

ವೃತ್ತಿ ಅವಳೇ, ಮನಸಳವಳೇ
ವೇಳೆ ಪರಿಯ ಮರೆಸಿದವಳೇ
ಮೂಕನಾಗಿ ಮಾಡಿದೋಳೆ
ಲಹರಿಯಲ್ಲಿ ನೂಕಿದೋಳೆ.. ಈ ಬದುಕಿಗೆ ಯಾರು ಹೊಣೆ?

ಬಿಸಿಲು ಅವಳೇ, ಮಳೆಯು ಅವಳೇ
ಗಾಳಿ ಗುಡುಗು ಎಲ್ಲ ಆವಳೇ
ಮುಖದ ತೊಗರು ಕಪ್ಪು ಅವಳೇ
ಕೊನೆಯ ಕ್ಷಣದ ನೆರಳು ಅವಳೇ.. ಈ ಪಾಡಿಗೆ ಯಾರು ಹೊಣೆ?

ಪುಸ್ತಕದಲೂ ಕುಂತಲವಳೇ
ಮಸ್ತಕದಲೂ ನಿಂತಲವಳೇ
ತುದಿ ಲೇಖನಿಯ ಉಗುಳು ಆವಳೇ
ಹಿಂದೆ ನಿಂತು ನಡೆಸಿದವಳೇ.. ಈ ಪರಿಗೆ ಯಾರು ಹೊಣೆ?

5 comments:

  1. ley machha super kanla

    ReplyDelete
  2. ಇದಕೆಲ್ಲಾ ನೀನೆ ಹೊಣೆ

    ReplyDelete
  3. ನೀನಲ್ಲ ಅಂದ್ರೆ ನಿನ್ನ ಅವಳೇ ಹೊಣೆ

    ReplyDelete
  4. ಲೋಫರ್ ನಿನಗೆ ಇರೋದೇ ಒಬ್ಬ ಅಭಿಮಾನಿ
    ಅದರಲ್ಲು ಯಾರು ಅಂತ ಕೇಳ್ತಿಯಾ

    ReplyDelete