Thursday, February 12, 2009
ಯಾರು ಹೊಣೆ?
ಕನಸುಗಳೂ ನನ್ನದೇ, ನೋವುಗಳೂ ನನ್ನದೇ
ಏನಿಹುದು ಈ ಬಾಳ ಲಹರಿಯಲಿ
ಪ್ರೀತಿ ಬಿತ್ತಿ, ಮೊಳಕೆಯೊಡೆಸಿ, ಕತ್ತಲೆರಚಿ
ಬೆನ್ನ ನೂಕೋ ಈ ವಿಧಿಗೆ ಯಾರು ಹೊಣೆ?
ಹುಟ್ಟು ಅವಳೇ, ಸಾವು ಅವಳೇ
ಮೋಹ ನಗೆಯ ಚೆಲ್ಲಿದವಳೇ
ತನು ಮನದಲಿ ಕುಳಿತಳವಳೇ
ಊಟ, ನಿದ್ದೆ ಕಸಿದುಕೊಂಡ ಈ ಸ್ಥಿತಿಗೆ ಯಾರು ಹೊಣೆ?
ಹಗಲು ಅವಳೇ, ಇರುಳು ಅವಳೇ
ಹೊಂಬೆಳಕಿನ ಧ್ಯಾನ ಅವಳೇ
ದೇವರಿಲ್ಲ ಕುಳಿತಳವಳೇ
ಎತ್ತ ನೋಡಿದರೆತ್ತ ಅವಳೇ.. ಈ ರೀತಿಗೆ ಯಾರು ಹೊಣೆ?
ವೃತ್ತಿ ಅವಳೇ, ಮನಸಳವಳೇ
ವೇಳೆ ಪರಿಯ ಮರೆಸಿದವಳೇ
ಮೂಕನಾಗಿ ಮಾಡಿದೋಳೆ
ಲಹರಿಯಲ್ಲಿ ನೂಕಿದೋಳೆ.. ಈ ಬದುಕಿಗೆ ಯಾರು ಹೊಣೆ?
ಬಿಸಿಲು ಅವಳೇ, ಮಳೆಯು ಅವಳೇ
ಗಾಳಿ ಗುಡುಗು ಎಲ್ಲ ಆವಳೇ
ಮುಖದ ತೊಗರು ಕಪ್ಪು ಅವಳೇ
ಕೊನೆಯ ಕ್ಷಣದ ನೆರಳು ಅವಳೇ.. ಈ ಪಾಡಿಗೆ ಯಾರು ಹೊಣೆ?
ಪುಸ್ತಕದಲೂ ಕುಂತಲವಳೇ
ಮಸ್ತಕದಲೂ ನಿಂತಲವಳೇ
ತುದಿ ಲೇಖನಿಯ ಉಗುಳು ಆವಳೇ
ಹಿಂದೆ ನಿಂತು ನಡೆಸಿದವಳೇ.. ಈ ಪರಿಗೆ ಯಾರು ಹೊಣೆ?
Subscribe to:
Post Comments (Atom)
ley machha super kanla
ReplyDeleteಇದಕೆಲ್ಲಾ ನೀನೆ ಹೊಣೆ
ReplyDeleteನೀನಲ್ಲ ಅಂದ್ರೆ ನಿನ್ನ ಅವಳೇ ಹೊಣೆ
ReplyDeleteಲೋಫರ್ ನಿನಗೆ ಇರೋದೇ ಒಬ್ಬ ಅಭಿಮಾನಿ
ReplyDeleteಅದರಲ್ಲು ಯಾರು ಅಂತ ಕೇಳ್ತಿಯಾ
yarri avlu??
ReplyDelete